People often use abbreviations on chat and WhatsApp. Although, they are not proper English words, people often use them as it makes typing faster. Here are the full forms of these common abbreviations
WhatsApp ನಲ್ಲಿ ಅಥವಾ Chat ನಲ್ಲಿ ಮಾತನಾಡುವಾಗ ಜನರು ಸಾಮಾನ್ಯವಾಗಿ ಪದಗಳನ್ನು ಸಂಕ್ಷೇಪಿಸಿ (abbreviations) ಉಪಯೋಗಿಸುತ್ತಾರೆ. ಇದು ಸಾಮಾನ್ಯವಾಗಿ ಇಂಗ್ಲೀಷ್ ಪದಗಳು ಅಲ್ಲ, ಆದರೂ, ಜನರು ತ್ವರಿತವಾಗಿ ಬರೆಯಲು ಇದನ್ನು ಬಳಸುವರು.
ಕೆಲವು ಸಂಕ್ಷಿಪ್ತ ಪದಗಳು ಮತ್ತು ಅದರ ಅರ್ಥ:
1. LOL: Laugh Out Loud (ಜೋರಾಗಿ ನಗುವುದು)
2. BRB: Be right back
(ಈಗ ಹಿಂತಿರುಗಿ ಬರುವೆ)
3. TTYL: Talk to you later
(ನಂತರ ಮಾತನಾಡೋಣ)
4. BTW: by the way = ಅಂದಹಾಗೆ; Example: By the way, you were looking good today!
(ಅಂದಹಾಗೆ, ನೀನು ಇಂದು ಚೆನ್ನಾಗಿ ಕಾಣಿಸುತ್ತಿದ್ದೆ!)
5. BFF: Best friend(s) forever = ಯಾವಾಗಲು ಜೊತೆಗಿರುವ ಉತ್ತಮವಾದ ಗೆಳೆಯ/ಗೆಳತಿ; Example: She is my BFF.
(ಅವಳು ನನ್ನ ಅತ್ಯಂತ ಉತ್ತಮವಾದ ಗೆಳತಿ)
6. DM: Direct Message = ನೇರವಾಗಿ ಮೆಸೇಜ್ ಮಾಡುವುದು; Example: If you have something important, just DM me. Don't message anything publicly.
(ಏನಾದರು ಮುಖ್ಯವಾದುದ್ದು ಇದ್ದರೆ, ನೀನು ನನಗೆ ನೇರವಾಗಿ ಮೆಸೇಜ್ ಮಾಡು. ಬಹಿರಂಗವಾಗಿ ಮೆಸೇಜ್ ಮಾಡಬೇಡ. )
7. IDK: I don't know (ನನಗೆ ಗೊತ್ತಿಲ್ಲ. )
8. IMHO: in my humble opinion (ನನ್ನ ದೃಷ್ಟಿಯಲ್ಲಿ)
9. ROFL: rolling on the floor laughing = ಹೊಟ್ಟೆ ಹುಣ್ಣಾಗುವಂತೆ ನಗುವುದು (ಎಷ್ಟು ನಗುವುದೆಂದರೆ, ನಗುತ್ತಲೇ ಉರುಳಿ ಬೀಳುವುದು)
10. w/o: without = ನ ಬಿಟ್ಟು; Example: I will be going to the mall w/o my friend. (ನಾನು ನನ್ನ ಗೆಳೆಯನನ್ನು ಬಿಟ್ಟು ಮಾಲ್ ಗೆ ಹೋಗುತ್ತಿರುವೆ. )
11. XO: hugs and kisses = ಅಪ್ಪುಗೆಗಳು ಮತ್ತು ಚುಂಬನಗಳು; Example: I will see you later, XO!
(ನಿನ್ನನ್ನು ನಂತರ ಭೇಟಿ ಮಾಡುವೆ, ಅಪ್ಪುಗೆಗಳು ಮತ್ತು ಚುಂಬನಗಳು!)