Here are 4 word pairs that commonly used incorrectly.
(ನಾವು ಸಾಮಾನ್ಯವಾಗಿ ತಪ್ಪಾಗಿ ಬಳಸುವ ೪ ಪದಗಳ ಜೋಡಿ ಇಲ್ಲಿವೆ. )
1. Wedding vs. Marriage - these cannot be used interchangeably. A marriage is a long term relationship between two individuals. A wedding, on the other hand, is the ceremony of getting married.
Therefore, “You are invited to my wedding. ” is correct and “You are invited to my marriage”. is incorrect usage.
(ಮದುವೆ vs ವೈವಾಹಿಕ - ಇವೆರಡನ್ನೂ ಅದಲುಬದಲಾಗಿ ಬಳಸಲಾಗದು. ವೈವಾಹಿಕವೆಂದರೆ ಇಬ್ಬರ ನಡುವಿನ ಬಹು ಕಾಲದ ಬಂಧನ. ಇನ್ನೊಂದೆಡೆ ಮದುವೆಯೆಂದರೆ ವೈವಾಹಿಕ ಜೀವನಕ್ಕೆ ಕಾಲಿಡುವ ಸಮಾರಂಭ. ಆದ್ದರಿಂದ "ನನ್ನ ಮದುವೆಗೆ ನಿನ್ನನ್ನು ಆಮಂತ್ರಿಸುತ್ತಿದ್ದೇನೆ" ಸರಿ ಮತ್ತು "ನನ್ನ ವೈವಾಹಿಕಕ್ಕೆ ನಿನ್ನನ್ನು ಆಮಂತ್ರಿಸುತ್ತಿದೇನೆ" ತಪ್ಪು ಬಳಕೆಯಾಗಿದೆ. )
“Their marriage was a disaster. ” implies that the couple was not happy in their life together and are probably separated or divorced. On the other hand, “Their wedding was a disaster. “ implies that something happened during the wedding and that the ceremony did not go smoothly.
("ಅವರ ವೈವಾಹಿಕ ಒಂದು ದುರಂತವಾಗಿತ್ತು" ಅಂದರೆ ಆ ಜೋಡಿ ಒಟ್ಟಿಗೆ ಸಂತೋಷದಿಂದ ಜೀವಿಸಲಿಲ್ಲ ಮತ್ತು ಈಗ ಬೇರ್ಪಟ್ಟಿರುವರು ಅಥವಾ ವಿಚ್ಛೇದನೆ ಪಡೆದಿದ್ದಾರೆ. ಇನ್ನೊಂದೆಡೆ "ಅವರ ಮದುವೆ ಒಂದು ದುರಂತವಾಗಿತ್ತು" ಅಂದರೆ ಅವರ ಮದುವೆ ಸಮಾರಂಬ ಸುಸೂತ್ರವಾಗಿ ನಡೆಯಲಿಲ್ಲ. )
2. Weather vs. climate: Climate is the average weather usually taken over a 30 - year time period for a particular region and time period. Climate is not the same as weather, but rather, it is the average pattern of weather for a particular region. Weather describes the short - term state of the atmosphere.
(ಹವಾಮಾನ vs ಹವಾಗುಣ: ಹವಾಗುಣ ಒಂದು ನಿರ್ದಿಷ್ಟ ಪ್ರದೇಶ ಹಾಗು ಸಮಯದಲ್ಲಿ ೩೦ ವರ್ಷಗಳ ಕಾಲ ಮಾಪಿಸಿದ ಹವಾಮಾನದ ಸರಾಸರಿಯಾಗಿರುತ್ತದೆ. ಹವಾಗುಣ ಹವಾಮಾನದಂತೆ ಅಲ್ಲ, ಆದರೆ ಅದು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಮಾಪಿಸಿದ ಹವಾಮಾನದ ಸರಾಸರಿಯಾಗಿದೆ. )
For example: "The weather is great today" is correct but, "the climate is great today" is not correct. (ಉದಾಹರಣೆಗೆ: "ಇಂದಿನ ಹವಾಮಾನ ಅದ್ಭುತವಾಗಿದೆ" ಸರಿ ಆದರೆ "ಇಂದಿನ ಹವಾಗುಣ ಅದ್ಬುತವಾಗಿದೆ" ಸರಿಯಲ್ಲ. )
3. Jobs vs. Career: A job can be just going to work to earn a paycheck. A career is a journey that includes all your jobs, experiences, and training in the same field or career cluster.
(ಕೆಲಸ/ಉದ್ಯೋಗ vs ವೃತ್ತಿ: ಕೆಲಸ/ಉದ್ಯೋಗ ಅಂದರೆ ಅದು ಹಣವನ್ನು ಸಂಪಾದಿಸಲು ಮಾಡುವ ಕ್ರಿಯೆ. ವೃತ್ತಿ ಎಂದರೆ ಎಲ್ಲ ಕೆಲಸಗಳು, ಅನುಭವಗಳು, ಮತ್ತು ಅದೇ ರಂಗದಲ್ಲಿನ ತರಬೇತಿಯನ್ನು ಒಳಗೊಂಡಿರುತ್ತದೆ ಅಥವಾ ವೃತ್ತಿ ಗೊಂಚಲು. )
For example: I got a new job, is correct but 'I got a new career' is incorrect. (ಉದಾಹರಣೆಗೆ: ನನಗೆ ಹೊಸ ಕೆಲಸ/ಉದ್ಯೋಗ ದೊರೆಯಿತು, ಎಂಬುದು ಸರಿ ಆದರೆ 'ನನಗೆ ಹೊಸ ವೃತ್ತಿ ದೊರೆಯಿತು' ಎಂಬುದು ಸರಿಯಲ್ಲ. )
4. Hear vs. Listen: ‘Hearing’ is an event; it is something which happens to us as a natural process even if we are not trying to pay attention. ‘Listening’ is an action; it is something we do consciously. When we listen, we try to hear. We pay attention and try to understand every sound.
(ಕೇಳು vs ಆಲಿಸು: 'ಕೇಳಿಸಿಕೊಳ್ಳುವುದು' ಗಮನ ವಹಿಸದಿದ್ದರು ನಮಗೆ ಆಗುವ ಒಂದು ಸಹಜ ಪ್ರಕ್ರಿಯೆ. 'ಆಲಿಸುವುದು' ಒಂದು ಕ್ರಿಯೆ; ಅದು ನಾವು ಗಮನವಿಟ್ಟು ಮಾಡುವುದು. ನಾವು ಆಲಿಸುವಾಗ, ಕೇಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಪ್ರತಿಯೊಂದು ಶಬ್ದವನ್ನು ಗಮನವಹಿಸುತ್ತೇವೆ ಹಾಗು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. )
For example: i) I heard a knock at the door.
ii) I listened very carefully to what she said and wrote it all down.
(ಉದಾಹರಣೆಗೆ: i) ಬಾಗಿಲು ಬಡಿದಂತೆ ನನಗೆ ಕೇಳಿಸಿತು. ii) ಅವಳು ಹೇಳಿದ್ದನ್ನು ನಾನು ಎಚ್ಚರಿಕೆಯಿಂದ ಆಲಿಸಿ ಎಲ್ಲವನ್ನು ಬರೆದುಕೊಂಡಿದ್ದೇನೆ. )